"ಪ್ರಕೃತಿಯ ರಕ್ಷಣೆ ನಿಮ್ಮ ಭವಿಷ್ಯಕ್ಕಾಗಿ ನೀವು ಮಾಡಬಹುದಾದ ಅತ್ಯುತ್ತಮ ಬದ್ಧತೆಯಾಗಿದೆ!!"

ತೋಟಗಾರಿಕೆ ಇಲಾಖೆ

ತೋಟಗಾರಿಕೆ ಕ್ಷೇತ್ರವು ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ತೋಟಗಾರಿಕೆ ಕ್ಷೇತ್ರವು ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ತೋಟಗಾರಿಕೆ ಬೆಳೆಗಳು, ನಿರ್ದಿಷ್ಟವಾಗಿ ಹಣ್ಣಿನ ಬೆಳೆಗಳು ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಗೆ ತುಲನಾತ್ಮಕವಾಗಿ ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ. ತರಕಾರಿಗಳನ್ನು ಹೆಚ್ಚಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆಯುತ್ತಾರೆ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಒಟ್ಟು ಕೃಷಿ ಉತ್ಪಾದನೆಯ ಮೌಲ್ಯದಲ್ಲಿ ತೋಟಗಾರಿಕೆ ಬೆಳೆಗಳ ಶೇಕಡಾವಾರು ಪಾಲು ಸುಮಾರು ಮೂವತ್ತು ಪ್ರತಿಶತದಷ್ಟಿದೆ. ತರಕಾರಿ ಮತ್ತು ಹಣ್ಣುಗಳ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಕರ್ನಾಟಕವು ತೋಟಗಾರಿಕೆ ಕ್ಷೇತ್ರದಲ್ಲಿ ಅಗಾಧ ಮತ್ತು ಬಹುಮುಖ ಸಾಧನೆಗಳನ್ನು ಮಾಡಿರುವುದರಿಂದ ಇಡೀ ದೇಶದಲ್ಲಿ "ತೋಟಗಾರಿಕಾ ರಾಜ್ಯ" ಎಂದು ಪರಿಗಣಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ತೋಟಗಾರಿಕಾ ಬೆಳೆಗಳನ್ನು 20.63 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದ್ದು, ವಾರ್ಷಿಕ 185.20 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರುತ್ತದೆ. ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಸರಾಸರಿ ಉತ್ಪಾದಕತೆ ಪ್ರತಿ ಹೆಕ್ಟೇರ್‌ಗೆ 8.98 ಮೆಟ್ರಿಕ್ ಟನ್ ಆಗಿದೆ. ತೋಟಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ, ಕರ್ನಾಟಕ ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು NHM, RKVY, PMKSY, CDB, ಕೃಷಿ ಭಾಗ್ಯ ಮತ್ತು CHD.


“ಹಸಿರು’’-ತಂತ್ರಾಂಶ ಕುರಿತು

ತೋಟಗಾರಿಕೆ ಇಲಾಖೆಯು ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು, ದತ್ತಸಂಚಯವನ್ನು ಹೊಂದಲು ಫಲಾನುಭವಿಗಳ ನಿರ್ವಹಣೆಗಾಗಿ ಹಾಗೂ ಫಲಾನುಭವಿಗಳ ಖಾತೆಗೆ ಸಹಾಯಧನವನ್ನು ಆನ್‌ ಲೈನ್‌ ಮೂಲಕ ವರ್ಗಾವಣೆಯನ್ನು ಕಾರ್ಯಗತಗೊಳಿಸಲು. ನ್ಯಾಷನಲ್‌ ಇನ್ಫರ್‌ಮೇಟಿಕ್ಸ್‌ ಸೆಂಟರ್ (NIC) ಸಹಯೋಗದೊಂದಿಗೆ “ಹಸಿರು”- “HASIRU-Horticulture Application for Scheme Implementation and Regulating Utilization of Funds” ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಫಲಾನುಭವಿಗಳ ಆಯ್ಕೆಯಿಂದ ಪ್ರಾರಂಭಿಸಿ, ಫಲಾನುಭವಿಗಳ ಖಾತೆಗಳಿಗೆ ಸಹಾಯಧನವನ್ನು ವಿತರಿಸುವರೆಗೆ, ಎಲ್ಲಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ತಂತ್ರಾಂಶ ಹೊಂದಿದೆ.

ರೈತರ ಮೂಲ ವಿವರಗಳನ್ನು ಪಡೆಯಲು ಹಸಿರು ತಂತ್ರಾಂಶವನ್ನು ಫ್ರೂಟ್ಸ್‌ ತಂತ್ರಾಂಶಕ್ಕೆ ಲಿಂಕ್ ಮಾಡಲಾಗಿದೆ.

FRUITS ಮೂಲಕ ಫಲಾನುಭವಿಗಳಿಗೆ ಲಾಭವನ್ನು ವಿತರಿಸಲು ಹಸಿರು ತಂತ್ರಾಂಶವನ್ನು DBT ಮತ್ತು K2 ನೊಂದಿಗೆ ಲಿಂಕ್ ಮಾಡಲಾಗಿದೆ.

ಹಸಿರು ತಂತ್ರಾಂಶವು ಯೋಜನೆಗಳ ಪರಿಣಾಮಕಾರಿ ಮತ್ತು ಸಮಯೋಚಿತ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ ಮತ್ತು ನೈಜ ಸಮಯದ MIS ವರದಿಗಳನ್ನು ಹೊಂದಿದೆ.

“2018-19 ನೇ ಸಾಲಿನಿಂದ ತೋಟಗಾರಿಕೆ ಇಲಾಖೆಯ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳನ್ನು ಹಸಿರು ತಂತ್ರಾಂಶದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ”.

"ಹಸಿರು: ಹಾರ್ಟಿಕಲ್ಚರ್‌ ಅಪ್ಲಿಕೇಶನ್ ಫಾರ್‌ ಸ್ಕೀಮ್‌ ಇಪ್ಲಿಮೆಂಟೇಶನ್‌ ಆಂಡ್‌ ರೆಗುಲೇಟಿಂಗ್‌ ಯುಟಿಲೈಜೇಶನ್‌ ಆಫ್‌ ಫಂಡ್".


ಇಲಾಖೆಯ ಚಟುವಟಿಕೆಗಳು

ನೈಸರ್ಗಿಕ ಸಂಪನ್ಮೂಲವನ್ನು ಪ್ರೋತ್ಸಾಹಿಸುವುದು

ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮತ್ತು ಪರಿಸರ ಸುಧಾರಣೆಯನ್ನು ಉತ್ತೇಜನೆ.

ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವುದು

ಸೂಕ್ತವಾದ / ಆಧುನಿಕ ತಂತ್ರಜ್ಞಾನವನ್ನು ವಿಸ್ತರಿಸುವುದು ಮತ್ತು ನಿರ್ದಿಷ್ಟ ಪ್ರದೇಶಗಳಿಗೆ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು

ಉತ್ಪನ್ನಗಳ ಮಾರಾಟಕ್ಕಾಗಿ ಸಹಾಯಹಸ್ತ

ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆ ಸಂಪರ್ಕ ಸುಧಾರಣೆ

ಕ್ರೆಡಿಟ್ ಫೆಸಿಲಿಟಿ ಪಡೆಯಲು ಸಹಾಯ ಮಾಡುವುದು:

ಸಾಲದ ನೆರವು ಪಡೆಯಲು ರೈತರಿಗೆ ಸಹಾಯ ಮಾಡುವುದು.

MDB Magazine Template displayed on iPhone
ಸಾವಯವ ಕೃಷಿ

ಮೂಲಸೌಕರ್ಯ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವುದು ಮತ್ತು ಬೆಂಬಲಿಸುವುದು ಇಲಾಖೆಯ ಪ್ರಮುಖ ಉದ್ದೇಶಗಳಾಗಿವೆ.

ನಿರ್ದಿಷ್ಟ ನೀತಿಗಳನ್ನು ರಚಿಸುವುದು

ತೋಟಗಾರಿಕೆ ಇಲಾಖೆಯು ರಾಜ್ಯದಲ್ಲಿ ತೋಟಗಾರಿಕೆ ಸಂಬಂಧಿಸಿದ ನಿರ್ದಿಷ್ಟ ನೀತಿಗಳನ್ನು ರಚಿಸುವ ಮೂಲಕ ತೋಟಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. by Creating definate pocilies

ನೀರಾವರಿ ಸೌಲಭ್ಯವನ್ನು ಒದಗಿಸುವುದು

ವಿಶೇಷ ನೀರಾವರಿ ತಂತ್ರಜ್ಞಾನದ ಮೂಲಕ ಬೆಳೆಗಳಿಗೆ ಹಾನಿಯಾಗದಂತೆ ನೀರಿನ ಬಳಕೆಯನ್ನು ಕಡಿಮೆ ಮಾಡಲು ರೈತರಿಗೆ ಸಹಾಯ ಮಾಡುವುದು.

ಸಂಶೋಧನೆ

ತೋಟಗಾರಿಕಾ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವುದು.


ಬಳಕೆದಾರರ ಕೈಪಿಡಿ


ಪ್ರಮುಖ ಲಿಂಕ್‌ಗಳು


ಸಂಪರ್ಕಿಸಿ

ತೋಟಗಾರಿಕೆ ಇಲಾಖೆ

ಲಾಲ್‌ ಬಾಗ್‌ ಸಸ್ಯತೋಟ, ಬೆಂಗಳೂರು